About Our Institution
ಪ್ರಾಚೀನವಾದ ಭಾರತ ನಮ್ಮ ಪ್ರೀತಿಯ ತಾಯ್ನಾಡು. ಉದಾತ್ತ ಧರ್ಮ ಸಂಸ್ಕೃತಿ ನಾಗರೀಕತೆಗಳ ನೆಲೆವೀಡು. ಅದರ ಮೌಲ್ಯಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುವ ಸಮಾಜದಿಂದ ಮಾತ್ರ ನಮ್ಮ ಇಂದಿನ ದುರ್ಬಲತೆಗಳು ದೂರವಾಗಿ ಸ್ವಾಭಿಮಾನೀ ಆಧುನಿಕ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯವೆಂಬುದು ವಿಚಾರವಂತ ದೇಶಪ್ರೇಮಿಗಳೆಲ್ಲರ ನಂಬಿಕೆ. ಇದನ್ನರಿತು ನಾಡಿನ ಒಳಿತಿಗಾಗಿ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಬೇಕೆಂಬ ಮಹದಾಸೆ ಹೊತ್ತ ಅನೇಕ ಹಿರಿಯರ ಪ್ರಯತ್ನದ ಫಲವೇ ಈ ಸಂಸ್ಥೆ.
ವಿದ್ಯಾರ್ಥಿಗಳಲ್ಲಿ ವಿದ್ಯಾರ್ಜನೆಯ ಜೊತೆಗೆ ದೇಶಪ್ರೇಮ, ಭಾರತೀಯತೆ, ಶಿಸ್ತು-ಅನುಶಾಸನ, ವಿನಯಶೀಲತೆ, ಸಾಹಸೀ ಪ್ರವೃತ್ತಿ, ಆತ್ಮವಿಶ್ವಾಸ, ದೈವಭಕ್ತಿ, ಧರ್ಮಶ್ರದ್ಧೆ, ಸೇವಾಮನೋಭಾವ, ಸಾಮಾನ್ಯ ಜ್ಞಾನ, ವೈಜ್ಞಾನಿಕ ತಿಳುವಳಿಕೆ, ಪರಿಸರ ಪ್ರೇಮ ಇತ್ಯಾದಿಗಳನ್ನು ಬೆಳೆಯುವಂತೆ ಮಾಡುವುದೇ ಈ ವಿದ್ಯಾಸಂಸ್ಥೆಯ ಉದ್ದೇಶ.