Shreerama School, Vedashankara Nagara, Uppinangady Puttur, D.K.
Back to Home
 Shreerama School, Vedashankara Nagara, Uppinangady Puttur, D.K.

Shreerama School, Vedashankara Nagara, Uppinangady Puttur, D.K.

अप्राप्तितः प्रापणम

Primary school
Kannada Medium
Puttur

Raghurama Bhat C

Principal

About Our Institution

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಇದರ ಅಂಗಸಂಸ್ಥೆಯಾಗಿ ಸರ್ವರನ್ನು ತಲುಪುವ ಧ್ಯೇಯವನ್ನಿಟ್ಟುಕೊಂಡು 2011ರಲ್ಲಿ ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿ ಶ್ರೀರಾಮ ಶಾಲೆಯ ಪ್ರಾಥಮಿಕ ವಿಭಾಗವು ಕೃಷ್ಣೈಕ್ಯ ಪರಮ ಪೂಜ್ಯ ಶ್ರೀ ವಿಶ್ವೇಶ ತೀರ್ಥರ ಅಮೃತ ಹಸ್ತದಿಂದ ಶಿಲಾನ್ಯಾಸಗೊಂಡಿತು. ಪ್ರೌಢಶಾಲಾ ವಿಭಾಗವು 2017 ರಲ್ಲಿ ಪ್ರಾರಂಭಗೊಂಡಿದ್ದು ಪ್ರಸ್ತುತ ಇಲ್ಲಿ ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೋಧನಾ ಕ್ರಮದಲ್ಲಿ ಕನ್ನಡ ಮಾಧ್ಯಮದಲ್ಲಿ ಒಂದನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಶಿಕ್ಷಣ ಲಭ್ಯವಿದೆ. ಸನಾತನ ಭಾರತೀಯ ಸಂಸ್ಕೃತಿಯ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದ್ದು ವಿದ್ಯಾಭಾರತಿ ಕರ್ನಾಟಕದೊಂದಿಗೆ ಸಂಯೋಜಿತಗೊಂಡಿದೆ.

ವಿದ್ಯಾರ್ಥಿಗಳಿಗಾಗಿ ನಾವು ನೀಡುವ ಸೌಲಭ್ಯಗಳು

 ಒಂದನೆಯ ತರಗತಿಯಿಂದ ನಾಲ್ಕನೆಯ ತರಗತಿಯವರೆಗೆ ಪ್ರತಿ ತರಗತಿಯಲ್ಲಿ ಕನಿಷ್ಠ ವಿದ್ಯಾರ್ಥಿಗಳು-ಗರಿಷ್ಠ ಗಮನಕ್ಕಾಗಿ ಪೂರ್ವಗುರುಕುಲ ಪದ್ಧತಿ (ಪ್ರಾಥಮಿಕ ವಿಭಾಗದಲ್ಲಿ ಪ್ರತಿ ಮಗುವಿನ ಮೇಲೆ ಗಮನ ಕೇಂದ್ರೀಕರಿಸುವ ನಿಟ್ಟಿನಲ್ಲಿ 1:25 ಅನುಪಾತವಿದೆ.)
 ಪ್ರತಿ ವಿದ್ಯಾರ್ಥಿಗೂ ಉಚಿತ ಸಂಗೀತ ಶಿಕ್ಷಣ
 ಸರ್ವರಿಗೂ ಉಚಿತ ಕಂಪ್ಯೂಟರ್ ಶಿಕ್ಷಣ
 ಉಚಿತ ಭಜನಾ ತರಬೇತಿ
 ಉಚಿತ ಯೋಗ ತರಗತಿಗಳು
 ಆಸಕ್ತ ವಿದ್ಯಾಥಿಗಳಿಗೆ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಪ್ರಾಯೋಜಿತ ಉಚಿತ ಯಕ್ಷಗಾನ ಶಿಕ್ಷಣ
 ಒಂದನೆಯ ತರಗತಿಯಿಂದಲೇ ಒಂದು ಭಾಷಾ ವಿಷಯವಾಗಿ ಆಂಗ್ಲ ಭಾಷಾ ಬೋಧನೆ ಮತ್ತು ಸಂವಹನ ಇಂಗ್ಲೀಷ್ ತರಗತಿಗಳು
 ಕ್ರೀಡಾ ಚಟುವಟಿಕೆಗಳಿಗಾಗಿ ತರಬೇತಿಗಳು
 ಅನ್ನಬ್ರಹ್ಮ ಯೋಜನೆಯ ಮೂಲಕ ಉಚಿತ ಬಿಸಿಯೂಟ ವ್ಯವಸ್ಥೆ
 ವಿಜ್ಞಾನ ಕಲಿಕೆಯನ್ನು ಉತ್ತೇಜಿಸಲು ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ
 ಓದುವ ಕಲೆಯನ್ನು ಹೆಚ್ಚಿಸಲು ಗ್ರಂಥಾಲಯ ವ್ಯವಸ್ಥೆ
 ದೃಶ್ಯ ಶ್ರವಣ ಸಲಕರಣೆಗಳ ಮೂಲಕ ತರಗತಿಗಳು
 ಪಠ್ಯ ಪೂರಕ ಕಲಿಕೆಗಾಗಿ ವಿವಿಧ ಸಂಘಗಳು
 ಆಸಕ್ತರಿಗೆ ಭರತನಾಟ್ಯ, ಚೆಸ್, ಕ್ರಾಫ್ಟ್(ಕರಕುಶಲ) ಮತ್ತು ಕರಾಟೆ ತರಗತಿಗಳು

ನಮ್ಮ ವಿಶೇಷತೆಗಳು
ಮಾತೃಭಾಷಾ ಶಿಕ್ಷಣಕ್ಕೆ ಆದ್ಯತೆಯೊಂದಿಗೆ, ರಾಷ್ಟ್ರೀಯತೆ ಮತ್ತು ಭಾರತೀಯ ಸಂಸ್ಕೃತಿಯ ಅರಿವು ಮೂಡಿಸುವ ಪಠ್ಯ ಪೂರಕ ಶಿಕ್ಷಣ. ಇದಕ್ಕೆ ಪೂರಕವಾಗಿ ವಿದ್ಯಾಭಾರತಿ ಕರ್ನಾಟಕದ ಸಹಯೋಗದಲ್ಲಿ ಸಂಸ್ಕೃತಿ ಜ್ಞಾನ ಪರಿಚಯ ಮಾಲಿಕೆಯ ಪರಿಚಯ, ಜ್ಞಾನ-ವಿಜ್ಞಾನ ಮೇಳಗಳಲ್ಲಿ ಪಾಲ್ಗೊಳ್ಳಲು ಮಾರ್ಗದರ್ಶನ ಮತ್ತು ಅವಕಾಶ. ಕ್ರೀಡಾಭಾರತಿ ಸಹಯೋಗದಲ್ಲಿ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಅವಕಾಶ.
ವಿದ್ಯಾರ್ಥಿಗಳ ಏಕಾಗ್ರತೆಯನ್ನು ಮತ್ತು ಧಾರಣಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಕರಿಸುವ ದೈನಂದಿನ ಪ್ರಾರ್ಥನೆ ಸರಸ್ವತೀ ವಂದನೆ.
ಎಲ್ಲ ವಿದ್ಯಾರ್ಥಿಗಳು ಸಮಾನ ಅವಕಾಶ ಪಡೆಯಲು ಆಯೋಜಿಸುವ ಸಾಮೂಹಿಕ ಹುಟ್ಟುಹಬ್ಬದ ಆಚರಣೆ.
ಗ್ರಾಮ ವಿಕಾಸ ಯೋಜನೆಯ ಮೂಲಕ ಕೃಷಿ ಪೂರಕವಾದ ಮತ್ತು ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ.

ಸಮಾಜದೊಂದಿಗೆ ನಾವು
ಪೋಷಕ ಸಂಘ
ಶಾಲೆಯಲ್ಲಿ ಪೋಷಕ ಸಂಘವಿದ್ದು ಮಕ್ಕಳ ಶೈಕ್ಷಣಿಕ ಪ್ರಗತಿ ಮಾತ್ರವಲ್ಲ ಶಾಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ತನ್ನ ಸಹಾಯ ನೀಡುತ್ತಿದೆ. ಪ್ರತಿ ತರಗತಿಯ ಪೋಷಕ ಪ್ರತಿನಿಧಿಗಳು ಒಟ್ಟಾಗಿ ಪೋಷಕ ಸಂಘದ ನಿರ್ಮಾಣದಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯ್ಕೆಗೊಂಡು ಸಮಾಜ ಮತ್ತು ಶಾಲೆಯ ನಡುವಿನ ಕೊಂಡಿಯಾಗಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶ ನೀಡುತ್ತದೆ.

ಮಾತೃಭಾರತಿ
ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು ಎಂಬ ನಾಣ್ಣುಡಿಯಿದೆ. ಹಾಗೆಯೇ ಮಾತೆಯರನ್ನು ಶಾಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿಯನ್ನಾಗಿಸುವ ಗುರಿ ಮಾತೃಭಾರತಿಯದ್ದು. ಸಂಸ್ಕೃತಿ ಮತ್ತು ಸಂಪ್ರದಾಯಗಳ ರಕ್ಷಣೆ ಮಾತೆಯರಿಂದ ಆರಂಭಗೊಳ್ಳುತ್ತದೆ. ಹೀಗಾಗಿ ತಾಯಂದಿರನ್ನು ಶಾಲೆ-ಸಮಾಜದೊಂದಿಗೆ ತೊಡಗಿಸಿಕೊಂಡು ಉತ್ತಮ ಸಮಾಜದ ನಿರ್ಮಾಣಕ್ಕೆ ಪೂರಕ ಕಾರ್ಯ ಮಾತೃಭಾರತಿ ಮಾಡುತ್ತಿದೆ.

ಗ್ರಾಮ ವಿಕಾಸ
ಗ್ರಾಮ ವಿಕಾಸ ಯೋಜನೆಯ ಮೂಲಕ ಸಮಾಜದ ಅಭಿವೃದ್ಧಿಗಾಗಿ ಶಾಲೆ ತನ್ನನ್ನು ಸದಾ ತೊಡಗಿಸಿಕೊಳ್ಳುತ್ತಿದೆ. ಗ್ರಾಮ ಭಾರತ ಕೃಷಿ ಅವಲಂಬಿತವಾಗಿರುವ ಕಾರಣ, ಕೃಷಿ ಪೂರಕ ಚಟುವಟಿಕೆಗಳ ಆಯೋಜನೆ ಗ್ರಾಮ ವಿಕಾಸ ಸಮಿತಿಯ ಮೂಲಕ ನಡೆಯುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿ ಸದೃಢ ಗ್ರಾಮದ ರೂಪೀಕರಣದಲ್ಲಿ ಪಾತ್ರವಹಿಸುತ್ತಿದೆ. ಮಕ್ಕಳನ್ನು ಗ್ರಾಮ ಅಭಿವೃದ್ಧಿಯಲ್ಲಿ ಮುಖತಃ ಪಾಲ್ಗೊಳ್ಳುವಂತೆ ಮಾಡಿ ಅಭಿವೃದ್ಧಿಯಲ್ಲಿನ ಆನಂದಾನುಭೂತಿಯನ್ನು ಪಡೆಯುವಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ನಮ್ಮ ವಿಶೇಷತೆಗಳು
ಡಾ | ಎ ಪಿ ಜೆ ಅಬ್ದುಲ್ ಕಲಾಂ ಸಂಯೋಜಿತ ವಿಜ್ಞಾನ ಪ್ರಯೋಗಾಲಯ

ನಮ್ಮ ವಿಜ್ಞಾನ ಪ್ರಯೋಗಾಲಯ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರಗಳ ಪ್ರಯೋಗಗಳನ್ನು ಮಾಡಿ ಕಲಿಯುವ ವಿದ್ಯಾರ್ಥಿಗಳಿಗೆ ಪೂರಕವಾಗಿದೆ. ಮೂರು ವಿಭಾಗಗಳ ಪ್ರಯೋಗವನ್ನು ನಡೆಸಿ ಆ ಮೂಲಕ ವಿಷಯ ಜ್ಞಾನ ಪಡೆದುಕೊಳ್ಳಲು ಸಹಕಾರಿಯಾಗಿದೆ. ಶ್ರೀರಾಮ ಶಾಲೆಯು ಸಿಸ್ಕೋ ಸಂಭ್ರಮ ತಂಡದ ಸಹಯೋಗದೊಂದಿಗೆ ಪ್ರಯೋಗಾಲಯವನ್ನು ಉನ್ನತೀಕರಿಸಿದ್ದು ಸುಮಾರು ರೂ. 2.50 ಲಕ್ಷಗಳಷ್ಟು ಮೊತ್ತವನ್ನು ಬಳಸಿಕೊಳ್ಳಲಾಗಿದೆ.

ವಾರದಲ್ಲಿ ಪ್ರತಿ ತರಗತಿಗೆ ಒಂದು ಅವಧಿ ಈ ಪ್ರಯೋಗಾಲಯದಲ್ಲೇ ಅಧ್ಯಯನ ನಡೆಸುವಂತೆ ವೇಳಾಪಟ್ಟಿ ಸಿದ್ಧಗೊಳಿಸಿದ್ದು, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಿಸುವಲ್ಲಿ ಇದು ಸಹಕಾರಿಯಾಗಲಿದೆ. ಪ್ರಯೋಗಾಲಯದಲ್ಲಿ ವಿಜ್ಞಾನದ ಅನ್ವೇಷಣೆಗಳ ಕುರಿತು ತಿಳಿಯಲು ಮತ್ತು ಕಿರುಚಿತ್ರಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಸ್ಮಾರ್ಟ್ ಟಿವಿಯ ವ್ಯವಸ್ಥೆಯನ್ನು ಮಾಡಲಾಗಿದೆ.

ಇದರೊಂದಿಗೆ ವಿಜ್ಞಾನ ವಿಷಯಕ್ಕೆ ಸಂಬಂಧಿಸಿರುವ ಪುಸ್ತಕಗಳ ಓದುವ ಮೂಲೆಯೂ ಇದೆ.

ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ ವಿಜ್ಞಾನ ವಿಷಯಕ್ಕೆ ಸಂಬಂಧಿಸಿರುವ ಪ್ರಯೋಗಗಳನ್ನು ನಡೆಸಲು ಅವಶ್ಯಕವಿರುವ ಎಲ್ಲ ಪರಿಕರಗಳನ್ನು ಇಲ್ಲಿ ಜೋಡಿಸಲಾಗಿದ್ದು, ವಿದ್ಯಾರ್ಥಿಗಳಿಗೂ ಪ್ರಯೋಗ ಮಾಡುವ ಅವಕಾಶ ಒದಗಿಸಲಾಗುತ್ತದೆ.

ಭೌತಶಾಸ್ತ್ರಕ್ಕೆ ಸಂಬಂಧಿಸಿರುವ ವಿದ್ಯುಚ್ಛಕ್ತಿ, ಓಮ್‌ನ ನಿಯಮ, ರೋಧ ಹೀಗೆ ಇನ್ನೂ ಹಲವು ಪರಿಕಲ್ಪನೆಗಳ ಅರಿವಾಗುವಂತಹ ಆಕಾಶಕಾಯಗಳ ವೀಕ್ಷಣೆಗೆ ಪೂರಕವಾಗುವಂತಹ ವಾತಾವರಣ ನಿರ್ಮಾಣ ಮಾಡಲಾಗಿದೆ.

ರಸಾಯನಶಾಸ್ತ್ರದ ಆಮ್ಲ, ಪ್ರತ್ಯಾಮ್ಲ, ರಾಸಾಯನಿಕ ಕ್ರಿಯೆಗಳ ಬಗ್ಗೆ ಅರಿವು ಮೂಡಿಸುವ ಪ್ರಯೋಗಗಳನ್ನು ನಡೆಸಲು ಈ ಪ್ರಯೋಗಾಲಯ ಶಕ್ತವಾಗಿದೆ.

ಜೀವಶಾಸ್ತ್ರದ ಅಧ್ಯಯನಕ್ಕೆ ಪೂರಕವಾದ ಸ್ಲೈಡ್‌ಗಳು, ಸ್ಪೆಸಿಮನ್‌ಗಳ ಅಪಾರ ಸಂಗ್ರಹವಿದ್ದು ಗ್ರಾಮೀಣ ಪ್ರದೇಶದ ಮಕ್ಕಳ ವಿಜ್ಞಾನದ ಕುತೂಹಲವನ್ನು ಇನ್ನಷ್ಟು ಹೆಚ್ಚಿಸುವ ಕಾರ್ಯಕ್ಕೆ ಪೂರಕವಾಗಲಿದೆ.

ಸಂವಹನ ಆಂಗ್ಲ ಭಾಷಾ ತರಗತಿಗಳು

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಆಂಗ್ಲ ಭಾಷಾ ವಿಷಯವನ್ನು ಕ್ಲಿಷ್ಟಕರವಾದದ್ದು ಎಂದು ಭಾವಿಸಿಕೊಂಡಿದ್ದಾರೆ. ಆಂಗ್ಲ ಭಾಷಾ ಸಂವಹನ ಕೌಶಲ್ಯ ಹೊಂದುವಿಕೆಗೆ ಇದು ತೊಡಕಾಗಿದೆ. ಆದರೆ ನಮ್ಮ ಶ್ರೀರಾಮ ಶಾಲೆಯಲ್ಲಿ ಮಕ್ಕಳು ಆಂಗ್ಲ ಭಾಷಾ ಸಂವಹನ ಕೌಶಲವನ್ನು ಹೊಂದಬೇಕೆನ್ನುವುದು ನಮ್ಮ ಅಪೇಕ್ಷೆ. ಈ ಕಾರಣದಿಂದಾಗಿ ನಿಯತವಾಗಿ ನಡೆಯುವ ಆಂಗ್ಲ ಭಾಷಾ ವಿಷಯದ ಅವಧಿಯನ್ನು ಹೊರತುಪಡಿಸಿ ಪ್ರತಿ ತರಗತಿಗೆ ಮೂರು ಅವಧಿಗಳ ಸಂವಹನ ಆಂಗ್ಲ ಭಾಷಾ ತರಗತಿಗಳನ್ನು ವಾರದಲ್ಲಿ ಆಯೋಜಿಸಲಾಗುತ್ತಿದೆ. ಈ ತರಗತಿಗಳಲ್ಲಿ ಮಕ್ಕಳನ್ನು ತಮ್ಮನ್ನು ತಾವೇ ಪರಿಚಯಿಸಿಕೊಳ್ಳುವ ಬಗ್ಗೆ, ತನ್ನ ಗೆಳೆಯರು/ಪರಿಸರವನ್ನು ಪರಿಚಯಿಸುವ ಬಗ್ಗೆ ಜೊತೆಗೆ ಮಾತನಾಡುವ ಬಗ್ಗೆ ಪ್ರಾಯೋಗಿಕವಾಗಿಯೇ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಅವಧಿಗಳಲ್ಲಿ ಮಕ್ಕಳು ಚರ್ಚೆ, ತಾವು ನೋಡಿದ ಘಟನೆಗಳ ವರ್ಣನೆ ಹೀಗೆ ಪ್ರತಿಯೊಂದನ್ನೂ ಆಂಗ್ಲ ಭಾಷಾ ಮಾಧ್ಯಮದಲ್ಲಿಯೇ ಪ್ರಸ್ತುತಪಡಿಸುವುದರಿಂದ ಭಾಷಾ ಸಾಮರ್ಥ್ಯ ಹೆಚ್ಚಳದೊಂದಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಪ್ರಾಯೋಗಿಕ ತರಗತಿಯ ಅವಧಿಯಲ್ಲಿ ತಂತ್ರಜ್ಞಾನವನ್ನೂ ಬಳಸಲಾಗುತ್ತಿದ್ದು, ಸ್ಮಾರ್ಟ್ ಟಿವಿ, ಗಣಕಯಂತ್ರದ ಮೂಲಕ ವಿದ್ಯಾರ್ಥಿಗಳಿಗೆ ಭಾರತೀಯತೆ ಸಾರುವ ಸಣ್ಣ ಕಥೆಗಳ ಆಂಗ್ಲ ಕಿರುಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಬಳಿಕ ಮಕ್ಕಳು ಚರ್ಚಾ ಅವಧಿಯಲ್ಲಿ ತಾವು ಗಮನಿಸಿದ ಅಂಶಗಳನ್ನು ಚರ್ಚಿಸುತ್ತಾರೆ. ವಿದ್ಯಾರ್ಥಿಗಳಿಗೆ ಈ ಅವಧಿಯಲ್ಲಿ ನಾಟಕ ಪ್ರದರ್ಶಿಸುವ ಅವಕಾಶವೂ ಇದೆ. ಒಟ್ಟಿನಲ್ಲಿ ಚಟುವಟಿಕೆಗಳೊಂದಿಗೆ ಸಂವಹನ ನಡೆಸಿ ಭಾಷಾ ಬಳಕೆಯ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ನಮ್ಮದಾಗಿದೆ. ಆ ಮೂಲಕ ಮಕ್ಕಳ ಕೀಳರಿಮೆಯನ್ನು ಹಿಮ್ಮೆಟ್ಟಿಸುವುದು ನಮ್ಮ ಸಂಸ್ಥೆಯ ಧ್ಯೇಯವೂ ಆಗಿದೆ.

‘ದಾಶರಥಿ’ ಯೂಟ್ಯೂಬ್ ವಾಹಿನಿ
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪ್ರತಿಭಾನ್ವಿತರು. ಮಕ್ಕಳ ಪ್ರತಿಭೆ ಎಲ್ಲೆಡೆಗೂ ಹಬ್ಬಬೇಕೆಂಬ ಉದ್ದೇಶದಿಂದ ದಾಶರಥಿ ನಾಮಾಂಕಿತ ಯೂಟ್ಯೂಬ್ ವಾಹಿನಿಯನ್ನು ನಮ್ಮ ಶಾಲೆಯು 2020ರಲ್ಲಿ ಆರಂಭಿಸಿದ್ದು, ಇದರಲ್ಲಿ ಬಹುತೇಕ ಶಾಲಾ ಮಕ್ಕಳೇ ನಿರ್ವಹಿಸುವ ಬಹುತೇಕ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಇದರ ಜೊತೆಗೆ ಸಾಮುದಾಯಿಕ ಒಳಗೊಳ್ಳುವಿಕೆಗಾಗಿ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು ಸಮಾಜದಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ನಮ್ಮ ಸಂಪ್ರದಾಯಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು, ಶಾಲೆಯಲ್ಲಿ ಆಯೋಜಿಸಿದ ಕಾರ್ಯಕ್ರಮಗಳ ವರದಿಯನ್ನು ವಾರ್ತಾ ರೂಪದಲ್ಲಿ ಇದರಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಈ ಮೂಲಕವೂ ಮಕ್ಕಳ ಭಾಷಾ ಕೌಶಲ, ಆತ್ಮವಿಶ್ವಾಸ ಹೆಚ್ಚಿಸುವುದು ನಮ್ಮ ಗುರಿಯಾಗಿದೆ.

Vision
A student of Shreerama School will be nationalist, Civilized, well cultured,
principle centered, endowed with a strong self – esteem and a concern for
fellow beings and the environment, besides being confident, competent and
employable.

Mission
Shreerama School will strive to provide models of value practices, offer
opportunities for learning and all round development including those for
preservation of environment and organize competence enhancement
programmes through able management and committed members of the staff
with the assistance of other stakeholders.

Facilities

Computer Lab
Library
Arts & Music
Transport

Admission Open

Admissions for 2026-27 academic year are now open.

Apply for Admission

Starts: Nov, 2 2025
Process: Online Registration

Contact Info

Address
Vedashankara Nagara, Uppinangady Puttur, D.K.
Phone
8762515590
Email
shriramaschooluppinangady@gmail.com

Quick Facts

Established
2011
Students
542
Faculty
26
Programs Offered
1ST
2ND
3RD
4TH
5TH
6TH
7TH