Jyothi
Principal
ಆತ್ಮೀಯರೇ,
ಪ್ರಾರಂಭದಿಂದಲೇ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬುವ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ನಿವೇದಿತಾ ಶಿಶುಮಂದಿರವನ್ನು 2012ನೇ ಜೂನ್ 4ರಂದು ಪ್ರಾರಂಭಿಸಲಾಯಿತು. ನಮ್ಮಿ ಶಿಶುಮಂದಿರವನ್ನು ಅಷ್ಟಕೋನಕೃತಿಯಲ್ಲಿ ರಚಿಸಲಾಗಿದೆ. ಇಲ್ಲಿ ಎರಡು ಕುಟೀರಗಳಿವೆ. ತಾಯಂದಿರು ಮಕ್ಕಳ ಚಟುವಟಿಕೆಗಳನ್ನು ಹೊರಗಿನಿಂದಲೇ ವೀಕ್ಷಿಸಬಹುದಾದ ಆದರೆ ಮಕ್ಕಳಿಗೆ ತಾಯಂದಿರು ಕಾಣದ ರೀತಿಯಲ್ಲಿ ನೋಡಲು ವಿಶೇಷ ಕನ್ನಡಿ ವ್ಯವಸ್ಥೆ ಇದೆ. ಸುಂದರ ವಾತಾವರಣದಲ್ಲಿ ನಿರ್ಮಿತವಾದ ಈ ಶಿಶು ಶಿಕ್ಷಣ ಕೇಂದ್ರದಲ್ಲಿ ಮಕ್ಕಳ ಸಾರೀರಿಕ, ಬೌಧಿಕ, ಮಾನಸಿಕ ವಿಕಾಸಕ್ಕೆ ಅನುಕೂಲವಾಗುವಂತಹ ನಿಟ್ಟಿನಲ್ಲಿ ಮಕ್ಕಳಿಗೆ ಶ್ಲೋಕ, ಭಜನೆ, ಭಗವದ್ಗೀತೆ, ಶಿಶು ಗೀತೆಗಳು, ಮಂಕುತಿಮ್ಮನ ಕಗ್ಗ, ಸರ್ವಜ್ಞನ ವಚನಗಳು, ಸುಭಾಷಿತಗಳು, ಕಬೀರ ದೋಹ, ಗಾದೆ ಮಾತುಗಳು, ಒಗಟುಗಳು, ಅಮೃತ ಬಿಂದು, ಅಮೃತವಚನ ಮುಂತಾದ ಆನೇಕ ಚಟುವಟಿಕೆಗಳನ್ನು ಪರಿಚಯಿಸಲಾಗುತ್ತದೆ. ಅಲ್ಲದೇ ಹಿಂದೂ ಸಂಸ್ಕೃತಿಯನ್ನು ತಿಳಿಯಪಡಿಸುವ ಅಷ್ಟಮಿ, ರಕ್ಷಾಬಂಧನ, ತುಳಸಿ ಪೂಜೆ, ಯುಗಾದಿ, ಸಂಕ್ರಾಂತಿ, ಚೌತಿ ಹೀಗೆ ಎಲ್ಲಾ ರಾಷ್ಟ್ರೀಯ ಹಬ್ಬ, ಧಾರ್ಮಿಕ ಹಬ್ಬಗಳನ್ನು ಆಚರಿಸುವುದರ ಮೂಲಕ ಅದರ ಮಹತ್ವವನ್ನು ತಿಳಿಸಲಾಗುತ್ತದೆ ಸರಕಾರದ ಯಾವುದೇ ಅನುದಾನ ಪಡೆಯದೆ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯಲ್ಲಿ ಮಕ್ಕಳಿಗೆ ಬೆಳಗಿನ ತಿಂಡಿ, ಮಧ್ಯಾಹ್ನ ಊಟವನ್ನು ನೀಡಲಾಗುತ್ತದೆ.
ನಮ್ಮ ಸಮಗ್ರ ಶಿಶು ಶಿಕ್ಷಣದ ವೈಶಿಷ್ಟಗಳು
ಮಾತೃಭಾಷೆಯಲ್ಲಿ ಶಿಕ್ಷಣ
ಮೂರರಿಂದ ಆರು ವರ್ಷದವರೆಗಿನ ಮಕ್ಕಳಿಗೆ ಶಿಶು ಶಿಕ್ಷಣ
ಮಗುವಿನ ಅಭಿರುಚಿ ಆಸಕ್ತಿಗಳಿಗೆ ಅನುಸಾರವಾಗಿ ಕಲಿಯಲು ಸ್ವಾತಂತ್ರ್ಯ.
ಮನೆಯ ವಾತಾವರಣದಲ್ಲಿ ಶಿಕ್ಷಣ ನೀಡುವುದು.
ಮಕ್ಕಳ ದೈಹಿಕ ಮತ್ತು ಮಾನಸಿಕ ವಿಕಾಸಕ್ಕಾಗಿ ಆಟಕ್ಕೆ ಸುಂದರ ಹೊರಾಂಗಣ ವ್ಯವಸ್ಥೆ,
ಪರಂಪರೆ ಮತ್ತು ಆಧುನಿಕತೆಗಳೆರಡರ ಸುಂದರ ಸಮನ್ವಯ.
' ಶಿಶು ಮನೋವಿಜ್ಞಾನದ ಸಂಶೋಧನೆಯ ಆಧಾರದ ಮೇಲೆ ಭಾರತೀಯ ಶಿಕ್ಷಣ.
ಐದು ವರ್ಷಕ್ಕೆ ಮುನ್ನ ಓದು ಬರಹಕ್ಕೆ ಆಗ್ರಹವಿಲ್ಲ.
ಬಣ್ಣದ ಉಡುಪು. (ಸಮವಸ್ತವಿಲ್ಲ)
ಅವಲೋಕನ ಇದೆ. (ಪರೀಕ್ಷೆ ಇಲ್ಲ)
ಕಲಿಕೆಗೆ ಪ್ರೋತ್ಸಾಹ ಇದೆ. (ಶಿಕ್ಷೆ ಇಲ್ಲ)
ಚಟುವಟಿಕೆ ಆಧಾರಿತ ಶಿಕ್ಷಣ ಇದೆ. (ಹೋಂವರ್ಕ್ ಇಲ್ಲ)
ಬೆಳಿಗ್ಗೆ 9:00 ರಿಂದ ಸಂಜೆ 4:00 ವರೆಗೆ ಶಿಕ್ಷಣ.
ಮಕ್ಕಳ ವಯಸ್ಸಿಗನುಗುಣವಾಗಿ ಶಿಕ್ಷಣ.
* ಮಕ್ಕಳ ಸ್ಮರಣಶಕ್ತಿಗೆ ಅನುಸಾರವಾಗಿ ಪೂರಕ ಚಟುವಟಿಕೆಗಳು,